ಈಗ ಚಿಮಿಣಿ ಎಣ್ಣೆ ಸಿಗುವುದಿಲ್ಲ.ಡೀಸೆಲ್ ದೀಪದ ಹೊಗೆಕಾರುವ ಬೆಳಕಿನಲ್ಲಿ ಬೀಡಿಕಟ್ಟಿ ಮಲಗುವಾಗ ನಡುರಾತ್ರೆ ಆಗ್ತದೆ.
ಬೆಳಗ್ಗೆ ಮೂರೂವರೆಗೆ ಎದ್ದು ಪುನ: ಬೀಡಿಯ ಕೆಲಸ.ಏಳು - ಒಂಭತ್ತು ವರ್ಷದ ಇಬ್ಬರು ಗಂಡು ಮಕ್ಕಳಿಗೆ , ಗಂಡನಿಗೆ , ತನಗೆ ಬೆಳಗಿನ ತಿಂಡಿ ಮಾಡಿಕೊಳ್ಳಬೇಕು .
ಮಧ್ಯಾಹ್ನ ಊಟಕ್ಕೆ ಗಂಜಿ - ಚಟ್ಣಿಯೋ ಪಲ್ಯವೋ ಸಿದ್ದ ಆಗಬೇಕು.
ಬಾಕಿ ಮನೆಗೆಲಸ ,ಸೊಸೈಟಿ - ಅಂಗಡಿ ಜೊತೆಗೆ ಬೀಡಿ ಎಲೆ ಕತ್ತರಿಸಿಕೊಳ್ಳಬೇಕು.
ಗಂಡ ಕೆಲಸಕ್ಕೆ ಹೋದರೆ ಹೋದ.ಏನಾದರೂ ತಂದರೆ ತಂದ.
ಕುಡಿದು ಬಂದರೆ ಅವ ದುರ್ವಾಸ .
ಇಬ್ಬರು ಮಕ್ಕಳೂ ಸುಮ್ಮಗಿರುವವರಲ್ಲ. ಮನೆಯ ಸುತ್ತ ಕಾಡಿನಲ್ಲಿ-
ನೆಡುವುದು - ಕಡಿಯುವುದು - ಮೀಯುವುದು - ಜಾರುವುದು - ಏರುವುದು ... ಅವರ ಮೇಲೆ ಸದಾ ತಾಯಿ ಕಣ್ಣು ಇರಲೇಬೇಕು.
ಹೀಗೆ ಬದುಕಾಟ ಮಾಡುವ ಹೆಣ್ಣೊಬ್ಬಳು, ನಮ್ಮೂರಲ್ಲಿ ಇದ್ದಾಳೆ.ಬದುಕಿನ ಏಕತಾನತೆಯಿಂದ ಬೇಸತ್ತು, ನಮ್ಮಲ್ಲಿಗೆ ಒಮ್ಮೊಮ್ಮೆ ಬರುತ್ತಾಳೆ.
ದನಗಳಿಗೆ ಹುಲ್ಲು ,ಚೂರುಪಾರು ಮನೆಗೆಲಸಗಳನ್ನು ಮಾಡಿ - ಮಾತಾಡಿ, ಹೊಟ್ಟೆತುಂಬ ಉಂಡು ಹೋಗುತ್ತಾಳೆ.
ಮಕ್ಕಳೂ ಅಷ್ಟೇ - ಒಂದು ಪೇರಳೆ ಸಿಕ್ಕಿದರೆ ಮೂರು ತುಂಡು ಮಾಡುತ್ತವೆ.
ಮೊನ್ನೆ -
" ಮೊಬೈಲು ತೆಗೆಯಲು ಲೋನು ಸಿಗ್ತದಾ ಅಣ್ಣೇರೇ " ಅಂತ ನನ್ನಲ್ಲಿ ಕೇಳಿದಳು !
ಓನ್ ಲೈನ್ ತರಗತಿಗಾಗಿ .ಕಂದಮ್ಮಗಳು ವಿದ್ಯಾವಂತರಾಗುವುದು ಅವಳ ಕನಸು .
ಅಮೆಝಾನ್ ,ಪ್ಲಿಪ್ಕಾರ್ಟ್ , ಇ ಎಮ್ ಐ .. ಎಲ್ಲ ಉಂಟಲ್ಲ . ಆದರೆ ಅದು, ದುಡ್ಡಿದ್ದವರಿಗಾಗಿ ಮಾತ್ರ.
ಸ್ಮಾರ್ಟ್ ಫೋನಿಗೆ ಬೇಕು ಆರೇಳು ಸಾವಿರ.
ನಾನೇನು ಅನುಕೂಲಸ್ಥನೇ! ಆದರೂ ,ಹಳತಾದರೂ ಒಂದು ಕೊಡಿಸಿದರೆ ?
ಕರೆಂಟಿಲ್ಲದ ಮನೆ.
ಮೊಬೈಲು ಚಾರ್ಜು ಮಾಡುವದು ಹೇಗೆ ?
ನೆಟ್ ಒಫರ್ ಹಾಕುವುದಕ್ಕೂ ಬೇಕಲ್ಲ ಒಂದು ಮೊತ್ತ ?
ಊರಶಾಲೆಯ ಟೀಚರ್, ದಾರಿಯಲ್ಲಿ ಕಾಣಸಿಕ್ಕಿದರೂ ನೋಟ್ಸ್ ಕೊಡುವುದಿಲ್ಲ - ಸರಕಾರದ ಆದೇಶವೇ ಹಾಗಿದೆ . ಓನ್ ಲೈನ್ ತರಗತಿಯ ಓನ್ ಲೈನ್ ದಾಖಲಾತಿ ಬೇಕು .
ಇನ್ನು ಹೇಗೆ ?
-ಪನೆಯಾಲರವಿರಾಜ.

ಆ ಹೆಣ್ಣು ಮಗಳ ಜೀವನೋತ್ಸಾಹಕ್ಕೆ ದೊಡ್ಡದಾದ ಹ್ಯಾಟ್ಸಪ್. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಧಾರವಾಗುವ ಸಹಾಯ ಹಸ್ತಗಳು ಮುಂದೆ barali. ನಾವೂ ಕೂಡ ಅದಕ್ಕೆ ಸಿದ್ಧ
ReplyDeleteಆ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಒಂದು ಮಗುವನ್ನು ನಮ್ಮ ಕೈಗಿತ್ತರೆ ಒಳ್ಳೆಯ ವಿದ್ಯಾಭ್ಯಾಸವನ್ನು ಖಂಡಿತಾ ನೀಡುತ್ತೇವೆ.
ReplyDeleteಆ ಹೆಣ್ಣು ಮಗಳ ಜೀವನೋತ್ಸಾಹಕ್ಕೆ ದೊಡ್ಡದಾದ ಹ್ಯಾಟ್ಸಪ್
ReplyDelete